ನಂಗೊತ್ತಿತ್ತು ನೀವು ಬರ್ತೀರಿ ಅಂತ… ನಿಮಗೆ ಸ್ವಾಗತ

ನಂಗೊತ್ತಿತ್ತು ನೀವು ಬರ್ತೀರಿ ಅಂತ... ನಿಮಗೆ ಸ್ವಾಗತ
ಸದ್ಯ ಬಂದ್ರಲ್ಲ, ಬನ್ನಿ ಬನ್ನಿ ನಿಮಗೆ ಆದರದ ಸ್ವಾಗತ. ಎಲ್ಲಿ ಬರೋದಿಲ್ವೋ ಅಂತ ಹೆದರಿದ್ದೆ. ಬನ್ನಿ ಕೂತ್ಕೊಳ್ಳಿ. ಬೆಳಿಗ್ಗೆಯಿಂದ ಸಿಕ್ಕಾಪಟ್ಟೆ ಕೆಲಸ, ಹೊಸ ಮನೆಗೆ ಹಳೆ ಮನೆಯಿಂದ ಎಲ್ಲವನ್ನು ತಂದು, ಜೋಡಿಸಿ, ಮತ್ತೆ ನೀವು ಬರುವಷ್ಟರಲ್ಲಿ ಎಲ್ಲವನ್ನು ಒಪ್ಪವಾಗಿ ಜೋಡಿಸ ಬೇಕಿತ್ತಲ್ವ, ಗೋಡೆಗಳಿಗೆ ಯಾವ ಬಣ್ಣ ಚೆನ್ನಾಗಿ ಕಾಣುತ್ತೆ, ಯಾವ ಅಕ್ಷರ ವಿನ್ಯಾಸ ಮತ್ತು ಅದರ ಬಣ್ಣ ನಿಮ್ಮ ಕಣ್ಣುಗಳಿಗೆ ಹಿತವಾಗಿರುತ್ತೆ ಅಂತೆಲ್ಲ ಯೋಚಿಸಿ, ಅಲಂಕರಿಸೋದೆ ಆಯ್ತು ಇವತ್ತು. ಬರೆಯೋದು ನಾಲ್ಕಾಣೆ, ಹೇಳೋದು ಹದಿನಾರಾಣೆದು ಅಂತೀರಾ. ಏನ್ಮಾಡೋದು ಹೇಳಿ ನಾನು ಬರೆಯೋಕೆ ಕುಳಿತಾಗಲೇ ಮನಸ್ಸು ಹಠಕ್ಕೆ ಬಿದ್ದ ಮಗುವಿನಂತೆ ಹಾಳೆಯ ಎದುರು ಧರಣಿ ಕುಳಿತು ಬಿಡುತ್ತೆ, ನಾನಾದರು ಏನ್ಮಾಡ್ಲಿ. ಇನ್ಮುಂದಾದ್ರು ಹಾಗೆಲ್ಲ ಆಗಬಾರದು ಅಂತ ಅಂದ್ಕೊಂಡಿದೀನಿ. ಏನೋ ನೀವೆಲ್ಲ ಇದೀರಲ್ಲ ಅದೇ ಧೈರ್ಯ. ನೋಡೇ ಬಿಡೋಣ ಹೊಸ ಮನೆಯ ವಾಸ್ತು ಹೇಗಿದೆ ಅಂತ, ಇನ್ನು ಎಲ್ಲಿಯವರೆಗೆ ಇಲ್ಲಿ ವಾಸ ಅನ್ನೋದು ಗೊತ್ತಿಲ್ಲ. ಹೊಸ ಮನೆಯ ಅಂಗಳದಲ್ಲಿ ಸಾಧ್ಯವಾದಷ್ಟು ದಿನ ಲಗೋರಿ ಆಡಲೇ ಬೇಕು ಅಂತ ಬಂದು ಕುಳಿತಿದೀನಿ. ನೋಡೇ ಬಿಡೋಣ ಏನಾಗುತ್ತೆ ಅಂತ. ನನ್ನ ಹೊಸ ಮನೆಗೆ ಬಂದಿದೀರಿ, ನಿಮಗೆ ಹೇಗನ್ನಿಸ್ತು ಈ ಮನೆ ಅಂತ ಹೇಳ್ತೀರಲ್ಲ. ಹೊರಡೋಕೆ ಮುನ್ನ ಒಂದು ಮಾತು ದಯವಿಟ್ಟು ಆಗಾಗ ತಪ್ಪದೆ ಬರ್ತಾ ಇರಿ, ಬರ್ತೀರಿ ಅಲ್ವ.
ಹೊಸಮನೆ ಪ್ರವೇಶಕ್ಕೆ ಶುಭಾಶಯಗಳು 🙂
ಬರೀ ಕಥೆ ಹೇಳೋದೇ ಆಯ್ತೋ ಅಥವಾ ಟೀ , ಕಾಫಿ.. ಏನಾದ್ರೂ……?????
ರಾಜೇಶ್.. ಹೊಸ ಮನೆ ಚೆನ್ನಾಗಿದೆ 🙂 ವಾಸ್ತು ಕೂಡ ಚೆನ್ನಾಗಿದೆ 😛 ಹಾಗಾಗಿ ಇನ್ನು ಮುಂದೆ no excuse ! ಮೈದಾನ ಸದಾ ಕಂಗೊಳಿಸುತ್ತಿರಬೇಕು. ಆಯ್ತಾ? 🙂
raajesh avare,
nimma hosa mane tumbaa chennagide.. andavaagide… namagella beligge beligge surprize kottiddakke thanks..:)…… one nimsha iri purti mane nodkondu bandbidtene..uta ready ide taane??????????????
-shruthi
ರಾಜೇಶ ಸರ್
ಹೊಸಮನೆ ಗ್ರಹಪ್ರವೇಶಕ್ಕೆ ಏನು ಮಾಡಿದ್ರಿ,
ಮನೆ ಚೆನ್ನಾಗಿದೆ,
ಹೊಸ ಮನೆ ನಿಮಗೆ ಸದಾ ಹರುಷ ಯಶಸ್ಸನ್ನು ನೀಡಲಿ
ರಾಜೇಶ,ಹೊಸ ಊರಲ್ಲಿನ ಹೊಸ ಮನೆ ಚೆನ್ನಾಗಿದೆ. ಹೊಸ ಬರಹಗಳಿಂದ ಚೆನ್ನಾಗಿ ಅಲಂಕರಿಸು. ನಾವಂತೂ ಬರ್ತಾ ಇರ್ತಿವಿ.
ಹಳೆ ಊರಿನ ನಮ್ಮ ಮನೆಗಳಿಗೆ ಬರ್ತಾ ಇರು. ವಾಸ್ತು ನೋಡಿ ಹೇಳ್ತಾ ಇರು.
ಹೊಸ ಮನೆಗೆ ಮನೆಯೊಡತಿ ಬೇಗ ಬರಲೇಂದು ಆಶಿಸುವ
ಲಕ್ಷ್ಮಣ
ನನ್ನ ಹಳೆ ಊರಿನ ಮನೆ ವಿಳಾಸ
http://www.nanisaha.blogspot.com
ಹೊಸ ಮನೆ ಚನ್ನಾಗಿದೆ.
ಒಂದು ಚಿಕ್ಕ ಸಲಹೆ… Font Size ಸ್ವಲ್ಪ ದೊಡ್ಡದು ಮಾಡಿ.
ರಾಜೇಶ್,
ಹೊಸ ಮನೆಯ ವಾಸ್ತು ತಿಳಿಯಾಗಿ ಬಿಳುಪಾಗಿದೆ ನಿಮ್ಮ ಮನಸ್ಸಿನಂತೆ. ಆದ್ರೆ ಒಂದು ಷರತ್ತು. ಮನಸ್ಸು ಮತ್ತು ಬ್ಲಾಗಿನಂತೆ ಬಿಳಿಯಾಗಿ ತಿಳಿಯಾಗಿ ಬರೆಯುವುದು ಬಿಟ್ಟು ನಿಮ್ಮ ವಯಸ್ಸಿಗೆ ತಕ್ಕಂತೆ ಒಂದಷ್ಟು ಕಲರ್ ಪುಲ್ ವಿಚಾರವನ್ನು ಬರೆಯಿರಿ. ಆಡುಗೆಯೂ ವೈವಿಧ್ಯಮಯವಿರಲಿ..ಮೈದಾನದಲ್ಲಿ ಲಗೋರಿ ಆಡುತ್ತಿರಬೇಕು. ಬಿದ್ದು ಎದ್ದು ಗಾಯಮಾಡಿಕೊಂಡು,….ಒಟ್ಟಾರೆ ಆಡುತ್ತಿರಬೇಕು. ಸುಮ್ಮನೆ ಮೈದಾನ ಕಾಲಿಬಿಟ್ಟಿರೋ…ಆಷ್ಟೇ…………
ಇದು ಅನ್ಯಾಯ ರಾಜೇಶ್… ಒಂದು ಪತ್ರಿಕೆ ಇಲ್ಲ ಸುದ್ದಿ ಇಲ್ಲ ಸೀದಾ ಮನೆ ಬದಲಾಯಿಸಿದ್ದೀರಿ… ಏನೇ ಆಗಲಿ ಮನೆಯನ್ನು ಈಗಲೇ ಸುಂದರವಾಗಿ ಒಪ್ಪವಾಗಿ ಜೋಡಿಸಿದ್ದೀರಿ.. ಶುಭವಾಗಲಿ 🙂
ಪ್ರೀತಿಯಿಂದ
ಶರಶ್ಚಂದ್ರ ಕಲ್ಮನೆ
ಸೂಪರ್ ರೀ ನೀವು… ಹಾಗೇ ಕ೦ಜೂಸು ಕೂಡ, ಒ೦ದ್ ಗ್ಲಾಸ್ ನೀರು,ಹಾಲು ಏನೂ ಇಲ್ಲ…ಪರವಾಗಿಲ್ಲ ಬಿಡಿ!!!
ಲಗೋರಿ,ಕ್ರಿಕೇಟ್,ಫ಼ುಟ್ ಬಾಲ್ ಅ೦ತ ಕೈ ಕಾಲು ಮುರ್ಕೋಬೇಡಿ.ಆವಾಗ್ ಆವಾಗ ನಮ್ಮ ಮನಸ್ಸಿಗೂ ಉಲ್ಲಾಸ ಕೊಡಿ ಆಯ್ತಾ ನಿಮ್ಮ ಬರಹ,ಕವನಗಳ ಮೂಲಕ.
ವಯಸ್ಸು ಅರಳು ಮರಳು ಅಲ್ಲ – ಏನಾದ್ರೂ ಸ್ಪೆಶಲ್ ಇದ್ದಾಗ ನಮ್ಗೂ ತಿಳಿಸಿ ಮು೦ಚಿತವಾಗಿ…;))
ಗೀತ
🙂
🙂
🙂
ರಾಜೇಶ್…
ಅಭಿನಂದನೆ. ಇನ್ನಷ್ಟು ಒಳಿತಾಗಲಿ, ಮತ್ತೆ ಮತ್ತೆ ಒಳ್ಳೊಳ್ಳೆಯ ಬರಹಗಳು ಬರಲಿ ಎಂದಿನಂತೆ 🙂
Where thou art – that – is Home.
ತುಂಬ ಚನ್ನಗೀದೆ.. LKGಯಲ್ಲಿ ಪಾಸು, UKGಯಲ್ಲಿ ತುಂಬ ನೀರೀಕ್ಷ ಇದೆ ಆಲ್ ದಿ ಬೆಸ್ಟ್ ….
nimma hosa manege naavu bandideevi…
nimage shubhavagali
dipavaLi habba hattira madikondu hosamanege hogiddeeri beLakinate beLagali.. beLaguttalE irali.. nimma mana haagu mane…
vandanegaLu
manasu
hosa mane tumba sakatagide kano…
rajesh,
olitaagali nimage… mane mana thumbirali…
hello Rajesh,
AbhinandanegaLu Rajesh 🙂
HOSA MANNE, HOSA MANASU, HOSA JAGA YELLA SANTHASAVA THARALI
ಅಭಿನಂದನೆಗಳು……ರಾಜೇಶ್…..
Keep Writing……………
ನವೀನ್
ರಾಜೇಶ್ ಅವರೇ..
ಹೊಸ ಮನೆ ತುಂಬಾ ಹಿಡಿಸ್ತು… ಈಗ ಕೂರಲು ಸಮಯ ಇಲ್ಲ …ಮತ್ತೆ ಬರ್ತೀನಿ…
ಎ.ಕಾ.ಗುರುಪ್ರಸಾದಗೌಡ.;www.balipashu.blogspot.com.;hanebaraha@gmail.com
ಗೃಹ ಪ್ರವೇಶದ ಸಿಹಿ ಇನ್ನೂ ಹಂಚ್ಲಿಲ್ವಾ! 🙂
ಹೊಸಮನೆಯಲ್ಲಿ ಯಾವಾಗಲೂ ಸಂತಸ ತುಂಬಿರಲಿ…
ನಮ್ಮನ್ನೂ ಭಾವದ ಅಲೆಯಲ್ಲಿ ತೇಲಿಸುತ್ತಿರಲಿ…
ಕನ್ನಡ ರಾಜ್ಯೋತ್ಸವದ ಶುಭಾಶಯಗಳು…
ಪ್ರಕಾಶಣ್ಣ..
ತುಂಬಾ ದೂರದಿಂದ ಹುಡುಕಿಕೊಂಡು ಬಂದಿದ್ದೇನೆ ನಿಮ್ಮ ಹೊಸ ಮನೆಯನ್ನ.
ಸ್ವೀಟ್ ಕೊಡಿ..
bandu tingaLaytu.
munde?
Hosa maneyalli yaroo kantilla??? mane badigege kotbitra hege? 😀
Yako mane vaastu sariyiddange kaantilla. Post galella nintu hodvu!!!
Raajesh avare,
Yake enu bareyuttilla??? nimma muddaada barahagalige naavu kaayuttiddeve… aadasgtu bega prakatisi…
-Inchara
Raajesh nimdu thirthahalliyalli yaava ooru maaraayre? namdu alle aaraga. yirodu chikmagalur.
rajesh,
hosa varsha, hosa bloginalli hosa article odallu banda nana nirashe golisa bedi
adastu bega blog update madi 🙂
ನಿಮ್ಮ ಹೊಸ ಮನೆಗೆ ನಾನೂ ಇಂದು ಭೇಟಿ ಕೋಟ್ಟೆ. ಇಷ್ಟವಾಯಿತು ಮನ(ನೆ)ದೊಳಗಿನ ಬರಹ. ಆದಷ್ಟು ಬೇಗ ಹೊಸ ಬರಹಗಳ ಜೋಡಣೆಯೂ ಇದರಲ್ಲಾಗಲೆಂದು ಹಾರೈಸುವೆ.
mane tumba channagideru