Archive

Archive for ಅಕ್ಟೋಬರ್, 2008

ಮರ್ಕಟ ಮನಸ್ಸು !

ಅಕ್ಟೋಬರ್ 21, 2008 2 comments

ಮನದ ಮಾಮರವೆಲ್ಲೋ ಕಂಪಿಸಿದ ಭ್ರಾಂತು…

ಶಿಶಿರನಾಗಮನದಿಂದ ಎಲೆಯುದುರಿ ನಿಂತಿದ್ದಕ್ಕೋ ????
ವಸಂತನಾಗಮನದಿಂದ ಮೈತುಂಬಿ ಬಂದದ್ದಕ್ಕೋ ????
ಕಾರಣವರಿಯೆನು !!!!

ನಿರಾಕಾರಣವಾಗಿ… ನಿರ್ವಿಕಾರಣವಾಗಿ… ನೀನು ನಿಂತು ತೂಗಿ…
ಇಷ್ಟಿಷ್ಟೇ ಎನುವಷ್ಟು ತಂಪೆಲರ ಸೂಸಿದಂತಿದೆ….
ಆ ತಂಗಾಳಿಯ ರಭಸಕ್ಕೆ ನಾನು ಸಿಲುಕಿ ನಲುಗಿದಂತಿದೆ !!!!

ಮತ್ತೆ ಮತ್ತೆ ನಗುವ ಆಸೆ ಮನದಿ ಚಿಗುರಿದಂತಿದೆ !!!!
ಆದರೇಕೋ ಪಾಪಿ ಮನಸು ಮತ್ತೇ ಸೋತು ಕುಳಿತಿದೆ….

Categories: Uncategorized