ನಾನ್ಯಾರು ಅಂದ್ರೆ!!!
ವೃತ್ತಿಯಿಂದ ತಂತ್ರಾಂಶ ಅಭಿಯಂತರ. ಹುಟ್ಟೂರು ಮಲೆನಾಡ ಸ್ವರ್ಗ ತೀರ್ಥಹಳ್ಳಿ. ಸದ್ಯಕ್ಕೆ ಉದರ ನಿಮಿತ್ತಮ್ ಬೆಂಗಳೂರಿನಲ್ಲಿ ವಾಸ. ಬರೆಯೋದು ನನ್ನ ಹವ್ಯಾಸ, ತೀರಾ ಪಕ್ವ ಬರಹಗಾರನಲ್ಲ, ಆದರೂ ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆದೇ ಇದೆ. ಸಾಹಿತ್ಯದಲ್ಲಿ ತೀರಾ ಏನನನ್ನು ಓದ್ಕೊಂಡಿಲ್ಲ, ಕುವೆಂಪು ಕಾದಂಬರಿಗಳು ಇಷ್ಟ, ಪೂಚಂತೇ ಬರಹಗಳು ತುಂಬಾನೆ ಇಷ್ಟ. ಸಿ. ಅಶ್ವತ್ ದನಿಯಲ್ಲಿ ಇರುವ ಎಲ್ಲ ಭಾವ ಗೀತೆಗಳು ಪಂಚ ಪ್ರಾಣ. ನನ್ನ ಬಗ್ಗೆ ಇಷ್ಟು ಸಾಕು, ಉಳಿದಿದ್ದು ಮತ್ತಿನ್ನೆಂದಾದರೂ ಹೇಳ್ತೀನಿ.


ಏನೋ ಹೇಳ್ತೀನಿ ಬನ್ನಿ ಅಂತ ಹೊಸಮನೆ ಎಲ್ಲ ತೋರಿಸಿದ್ರಿ, ಸಂಸಾರವಿನ್ನು ಶುರು ಮಾಡಿದ ಹಾಗಿಲ್ಲ?